ಬರಡಾದ ನೆಲದಲ್ಲಿ , ಚುಕ್ಕಿ  ನಕ್ಷತ್ರದಂತೆ  ಮಿನುಗಿದಾಗ , ಸಂಬ್ರಮ   ಹುಟ್ಟಿತು .
ಗರಗಸದ ಸಿಹಿ  ತಿನ್ನಲಾಗದೆ , ಸಂಬ್ರಮ ಸತ್ತಿತು .
ಉಡದ   ಬಟ್ಟೆ   ಉಟ್ಟಾಗ ಸಂಬ್ರಮ  ತನ್ನ  ನವಿಲು  ಗರಿಯನ್ನು  ಹರಡಿ  ಹುಟ್ಟಿತು ,
ಕತ್ತಲೆಯ  ಒಡನಾಟ  ತಾಳಲಾರದೆ  , ಸಂಬ್ರಮ ಬಿಕ್ಕಿ  ಬಿಕ್ಕಿ  ಸತ್ತಿತ್ತು .
ಪ್ರೇಮವೇ  ಹೃದಯ  ಎಂದಾಗ  ಸಂಬ್ರಮ ನಾನು  ಏನು ಎಂಬುದನ್ನು  ಮರೆತು  ಸಂಬ್ರಮ ಹುಟ್ಟಿತು 
ಪ್ರೇಮ  ಸತ್ತಾಗ , ಸಂಬ್ರಮ ತಾನುಟ್ಟ  ನಂಬಿಕೆಯ  ಬಿಸಿ  ಅಪ್ಪುಗೆಯನ್ನು   ಬಿಟ್ಟು, 
ಸಂಬ್ರಮ ತನ್ನ ಕೊನೆ ಉಸಿರು ಎಳೆಯಿತು.....
ಸಂಬ್ರಮ ಸತ್ತಾಗ ..
No comments:
Post a Comment